Posted in My words, Random thoughts

ಹಕ್ಕಿಯಂತೆ ಹಾರಾಡುವ ಆಸೆ

image

What if I Fall? Oh, but my darling what if you fly? – Erin Hanson

ನಮ್ಮಲ್ಲಿ ಎಷ್ಟೋ ಜನ ನಮ್ಮ ಆರಾಮವಾಗಿರುವ ಸ್ಥಿತಿಯಿಂದ ಹೊರಗೆ ನೆಗೆಯೂದಕ್ಕೆ ಹೆದರಿ ಕುತ್ಕೊಂಡಿದಿವಿ. ಜಿಗಿತ ಹೊಸ ಕೆಲಸಕ್ಕಾದ್ರೂ ಇರಬಹುದು, ಹೊಸ ಅನುರಾಗಕ್ಕಾದ್ರೂ ಇರಬಹುದು ಅಥವಾ ಪರಿಣಾಮವನ್ನ ತಿಳಿಯದೆ ಉತ್ಸಾಹವನ್ನ ಬೆನ್ನಟ್ಟಿ ಹೋಗೊದಾದ್ರು ಇರಬಹುದು. ಈ ಅಂಜಿಕೆ ಕೆಲವೊಂದು ಸಾರಿ ನಮ್ಮನ್ನ ಹಾರೋದಕ್ಕೆ ಹೆದರುತ್ತಿರೋ ಪಂಜರದ ಹಕ್ಕಿಗಳ ಹಾಗೆ ಮಾಡಿಬಿಡುತ್ತೆ. ‘ಈ ಪಂಜರ ನಮ್ಮನ್ನ ನಿರಾಶೆ, ನೋವು ಮತ್ತು ಸೋಲಿನ ಸಾಧ್ಯತೆಗಳಿಂದ ರಕ್ಷಿಸುತ್ತೆ’ ಎಂಬ ಸಮಾಧಾನವನ್ನ ನಮಗೆ ನಾವೇ ಹೇಳಿಕೊಳ್ತಿವಿ. ಆ ಕಾರಣದಿಂದಾಗಿ ಹಗಲುಗನಸು ಕಾಣುತ್ತಾ ಪಂಜರದಲ್ಲಿಯೆ ಉಳಿಯುತ್ತೆವೆ.

ರೆಕ್ಕೆಗಳನ್ನು ಬಡಿದು ಪಂಜರದ ಹೊರಗೆ ಹಾರಿಹೋಗಬೇಕು ಎಂದು ನಿರ್ಧರಿಸಿದ್ರೆ ಏನಾಗಬಹುದು?

ನಮ್ಮಲ್ಲಿ ಕೆಲವರು ಹಾರಿ ನಿರ್ದಿಷ್ಟ ಸ್ಥಳಕ್ಕೆ ಭದ್ರವಾಗಿ ತಲುಪ್ತಿವಿ. ಕೆಲವರು ಅರ್ಧದಲ್ಲೇ ಬೀಳ್ತಿವಿ. ಆದ್ರೆ ನಾವೆಲ್ಲರೂ ಧೈರ್ಯಶಾಲಿಯಾಗಬೇಕೆಂದೇ ತೀರ್ಮಾನಿಸಿ  ಭಯಾನಕ ಹಾರಟಕ್ಕೆ ಕೈ ಹಾಕಿ ಅದನ್ನ ಅನುಭವಿಸಿರ್ತಿವಿ. ಮುಖ್ಯವಾಗಿ ನಮ್ಮೆಲ್ಲರಿಗೂ ಸೆರೆಯಿಂದ ಹೊರಬಂದ ಪಯಣದ ಕಥೆಗಳಿರುತ್ತವೆ. ಆ ಕಥೆಗಳನ್ನ ಮುಂದೆ ಏನು ಮಾಡುತ್ತೆವೆನ್ನೋದು ಅವರವರಿಗೆ ಬಿಟ್ಟ ವಿಷಯ.

ಹಾರುವಾಗ ಅರ್ಧದಲ್ಲೇ ಬಿದ್ದಾಗ, ಮನಗೆಡದೆ ಅಪಯವಿದ್ದರೂ ಸಹ ಧೈರ್ಯದಿಂದ ಇಷ್ಟಾದರೂ ಹಾರಿದೆವೆಂಬುದನ್ನು ಮನವರಿಕೆ ಮಾಡಿಕೊಳ್ಳುವುದು ಉತ್ತಮ. ಪಂಜರದ ಹಕ್ಕಿಗಳು ಕೇವಲ ಹಗಲುಗನಸು ಕಾಣುತ್ತವೆ ಎನ್ನುವುದು ನೆನಪಿರಲಿ.

Advertisements

“Carping is a free product, it is readily available everywhere. Love is a double dhamaka offer, you will get it back with interest.”

Life Quote 5

Posted in Motivational, My words

ಸೌಖ್ಯ

image

ಸಂತಸ ನಾವು ತಲುಪಲಿಚ್ಛಿಸುವ ಒಂದು ಹಂತ ಅಥವಾ ಗುರಿಯಲ್ಲ. ಅದೊಂದು ಕ್ಷಣಿಕ ಸ್ಥಿತಿ. ಅದು ಕೋಪ, ಹತಾಶೆ ಮತ್ತು ಗೊಂದಲಗಳ ಜೊತೆಗೆ ಅಸ್ತಿತ್ವದಲ್ಲಿರುವ ಒಂದು ಭಾವನೆ. ನಾವು ಎಷ್ಟು ಬೇಗ ‘ಹೀಗೆ ಆಗಬೇಕು’ ಎಂಬ ನಿರಿಕ್ಷೆಗಳ್ಳನ್ನ ಬಿಡುವುದನ್ನು ಕಳಿಯುತ್ತೆವೋ ಆಗ ತಾನಾಗಿಯೇ ಸರಳವಾಗಿ ಜೀವಿಸುವುದು ಸುಲಭವಾಗುತ್ತೆ ಹಾಗು ಅದರ ಜೊತೆಗೆ ಬಳುವಳಿಯಾಗಿ ಬರುವ ದೌರ್ಜನ್ಯಗಳನ್ನು ಸದೆಬಡಿದು ಹಿಮ್ಮೆಟ್ಟಿ ನಿಲ್ಲಬಹುದು.

Posted in My words

ಎಲ್ಲರ ಮನೆ ದೋಸೆ ತೂತೇ

image

ನಿಮ್ಮ Facebook wall post ನೋಡಿ ಯೋಚಿಸ್ತಿದಿರಾ? Relax… ಚಿಂತೆ ಬೇಡ, ಕೆಟ್ಟದ್ದು ಎಲ್ರಿಗೂ ಆಗಿರುತ್ತೆ, ಕೆಲವರು express ಮಾಡ್ತಾರೆ ಇನ್ನು ಕೆಲವರು ಇಲ್ಲ. ಆದರೆ ಅದನ್ನ ಮುಚ್ಚಿಟ್ಟು ಮುಖವಾಡ ಧರಿಸಿರೋರೇ ಜಾಸ್ತಿ. ಯಾರಾದ್ರೂ ನಿಮಗಿಂತ ಮುಂದೆ ಹೋಗೇ ಹೋಗ್ತಾರೆ. ಹೋಲಿಸೊದು ಬೇಡ. ಅದು ಅವ್ರ ಕಥೆ, ಅವ್ರ ಜೀವನ, ಅವ್ರ ದಾರಿ. ನಿಮಗೆ 30, 40 ಅಥವಾ 60ರ ಒಳಗಡೆ ಸಾಧಿಸೋಕೆ ಆಗ್ಲಿಲ್ಲ ಅನ್ನೋದರ ಅರ್ಥ ನೀವು ಸೋತು ಹೋದ್ರಿ ಅಂತಲ್ಲ. ಏನು ಆಗಬೇಕಾಗಿರುತ್ತೋ ಅದು ಆಗೇ ಆಗುತ್ತೆ. ಇದರಿಂದ ಶ್ರದ್ಧೆ ಮತ್ತೆ ಪರಿಶ್ರಮದ ಮೇಲಿನ ಗಮನ ಕಡಿಮೆ ಆಗಬಾರದು. ಬದಲಿಗೆ ಈ ಭಾವಗಳು ನಾವು ಬೆಳೆಯೋದಕ್ಕೆ ಪ್ರೇರೇಪಣೆಯಾಗಬೇಕು. ನಾವು ಏಳಿಗೆಯಲ್ಲಿದ್ದೀವಿ ಅಂತ ಸುಮ್ನೆ ನುಗ್ಗಿದ್ರೆ ತಾವೇ ಹೋಗಿ ಗೋಡೆಗೆ ಡಿಕ್ಕಿ ಹೊಡೆದಂತೆ. ಜೀವನವನ್ನ ಸಮತೋಲನದಲ್ಲಿ ಇರಿಸೋದೇ ಚಾಣಾಕ್ಷತನ.

Posted in My words

ಪ್ರಭಾವ

ನಮ್ಮ ಮೌಲ್ಯಗಳಾದ ದಯೆ, ನಡತೆ ಹಾಗು ಮಾನವಿಯತೆ ಲೌಕಿಕ ಬದುಕಿನಲ್ಲಿ ಎಲ್ಲೊ ಕಳೆದು ಹೋಗಿವೆ ಅನಿಸ್ತಿದೆ. ಈಗಿನ ಕಾಲದ ತಂದೆ ತಾಯಂದಿರ ಮನೋವೃತ್ತಿ ಬದ್ಲಾಗ್ತಿದೆ ಅನಿಸ್ತಿಲ್ವಾ? ಮಕ್ಕಳ ಭವಿಷ್ಯದ ಬಗ್ಗೆ ತುಂಬಾನೇ ತಲೆ ಕೆಡಸ್ಕೊತಿದಾರೆ ಕೆಲ ಪೋಷಕರು. “ಬೇರೆಯವರು ನಮ್ಮ ಬಗ್ಗೆ ಏನು ಯೋಚಿಸ್ತಾರೋ” ಅನ್ನೊ ಆತಂಕದಲ್ಲಿ ತಮ್ಮ ಮಕ್ಕಳ ಮೇಲೆ ಅತಿಯಾದ ಒತ್ತಡ ಹೇರುತ್ತಿದ್ದಾರೆ. ಈ ಒತ್ತಡ ಶಾಲೆಗೆ ಕಳಿಸುವುದರಿಂದ ಶುರುವಾಗಿ ಅವ್ರ ಮಧುವೆ ಮಾಡುವ ತನಕ ಮುಂದುವರಿದಿದೆ. ಇದರಿಂದ ಮಕ್ಕಳ ಮಾನಸಿಕ ಸ್ಥಿತಿ ಕುಗ್ಗುತ್ತಿದೆ.ಇದು ಬರೀ ಅನಕ್ಷರಸ್ಥರು ಮಾಡ್ತಿರೋದಲ್ಲ, ವಿದ್ಯಾವಂತರು ಕೂಡ. ಮಕ್ಕಳ ಇಷ್ಟ, ಖುಷಿಗಿಂತ ಬೇರೆಯವರು ಏನು ಅಂದುಕೊಳ್ತಾರೆ ಅನ್ನೋದು ಮುಖ್ಯ ಆಗಲ್ಲ. ಮಕ್ಕಳಿಗೆ ನಾವು ಪಡುವ ಕಷ್ಟಗಳ ಅರಿವೇ ಇಲ್ಲ ಅನ್ನೋ ಮನೋಭಾವ ಅವರದು. ತಿಳಿಸಿ ಹೇಳಿದ್ರೆ ಅವ್ರು ಅರಿತುಕೊಳ್ತಾರೆ. ಮಕ್ಕಳು ಸೋತಾಗ ಸಮಾಜ ನಮ್ಮ ಬಗ್ಗೆ ಮಾತನಾಡುತ್ತೆ ಅನ್ನೋದು ತಪ್ಪು. ಗೆದ್ರು ಅವ್ರ ಮಕ್ಕಳೇ  ಸೋತರು ಅವ್ರ ಮಕ್ಕಳೇ. ಅವ್ರು ಸೋತಾಗ ಹೀಯಾಳಿಸಿ ಮಾತಾಡೋದು ಬಿಟ್ಟು ಅವ್ರನ್ನ ಗೆಲುವಿನೆಡೆಗೆ ಪ್ರೇರೇಪಿಸಬೇಕು. ಯಾಕಂದ್ರೆ ಸೋಲೇ ಗೆಲುವಿನ ಮೆಟ್ಟಿಲು. ಪ್ರೀತಿಗಿಂತ ದೊಡ್ಡ ಔಷದವಿಲ್ಲ.

Posted in My words

ಸಾಧ್ಯ, ಅಸಾಧ್ಯದ ನಡುವೆ

Nothing is impossible in this world, even the word impossible says I m possible

ಈ ವಾಕ್ಯ ನಮ್ಮೆಲ್ರಿಗೂ ಚಿರಪರಿಚಿತ, ಆದ್ರೆ ಅದ್ರ ನಿಜವಾದ ಬೆಲೆ ಗೊತ್ತಿರೋದು ಆನುಭವ ಇರೋರಿಗೆ ಮಾತ್ರ. ಏನನ್ನಾದರೂ ಸಾಧಿಸಲಿಚ್ಛಿಸಿದಾಗ ಬೇಕಾಗೊದು ಹಟ ಮತ್ತು ದೃಢ ನಿರ್ಧಾರ. ದೇಹಕ್ಕೆ ದಣಿವಾದಗ, ಮನಸ್ಸು ಚಂಚಲವಾದ್ರೆ ನಿಯಂತ್ರಿಸುವ ಶಕ್ತಿ ಬುದ್ದಿಗೆ ಮಾತ್ರ ಇರೋದು. ಅದರ ಪವಾಡಗಳ ಸಾಕಷ್ಟು ಉದಾಹರಣೆಗಳನ್ನ ನಾವು ಕೇಳಿರ್ತಿವಿ. ಅಂತವ್ರಲ್ಲಿ ತಮ್ಮ ಹೆಂಡತಿಯ ಸಾವಿಗೆ ಕಾರಣವಾದ ಕಲ್ಲಿನ ಗುಡ್ಡವನ್ನೆ ಕಡಿದು ಅವ್ರ ಊರಿಗೆ ದಾರಿ ಮಾಡಿ ಕೊಟ್ಟ ದಶರತ್ ಮಾಂಜಿ ಕೂಡ ಒಬ್ರು. ಅವ್ರಿಗೆ ಇದ್ದಿದ್ದು ಹಟ ಮತ್ತು ದೃಢ ನಿರ್ಧಾರ. ಅವ್ರು ಅಂತಹ ಕಲ್ಲನ್ನೆ ಕಡೆದಿರುವಗಾ ನಂಮುಂದಿರೋ ಈ ಚಿಕ್ಕ ಪುಟ್ಟ ಸವಾಲುಗಳನ್ನ ಎದರಿಸೊದು ಅಸಾಧ್ಯವೇ? ಕಷ್ಟಗಳು ಮನುಷ್ಯನಿಗೆ ಬರದೇ ಮರಕ್ಕೆ ಬರುತ್ತಾ? ಆಗುತ್ತೆ ಅಂದ್ರೆ ಎಲ್ಲವೂ ಆಗುತ್ತೆ. ಆಗಲ್ಲ ಅಂದ್ರೆ ಏನೂ ಆಗಲ್ಲ.